ಏಲಕ್ಕಿ: ಸೈಟಾಮಿನೆ ಉಪವರ್ಗದ ಜಿûಂಜಿûಬರೇಸಿ ಕುಟುಂಬಕ್ಕೆ ಸೇರಿದ ಏಕದಳ ಪಂಗಡದ ಬಹುವಾರ್ಷಿಕ ಸಸ್ಯಗಳಲ್ಲೊಂದು; ಎಲೆಟೇರಿಯ ಕಾರ್ಡಮೋಮಮ್ ಎಂಬುದು ಇದರ ವೈe್ಞÁನಿಕ ಹೆಸರು. ಸಂಸ್ಕೃತದಲ್ಲಿ ಉಪಕುಂಚಿಕ ಎನ್ನುತ್ತಾರೆ. ಇದರಲ್ಲಿ ಒಂದೇ ಪ್ರಭೇದವಿದ್ದು ಇದು ಮುಖ್ಯವಾಗಿ ಭಾರತ ಮತ್ತು ಮಲಯ ಪರ್ಯಾಯದ್ವೀಪಗಳ ಸಸ್ಯವಾಗಿದೆ. ಜಗತ್ತಿನಲ್ಲೇ ಅತಿ ಪ್ರಮುಖವಾದ ಹಾಗೂ ಬೆಲೆ ಬಾಳುವ ಸಾಂಬಾರ ಪದಾರ್ಥವೆನಿಸಿದೆ. ಇದು ಪ್ರಪಂಚದ ಕೆಲವೇ ಭಾಗಗಳಲ್ಲಿ ಮಾತ್ರ ಬೆಳೆದರೂ ಬಹಳ ಹಿಂದಿನ ಕಾಲದಿಂದಲೂ ಅನೇಕ ದೇಶಗಳಲ್ಲಿ ಪ್ರಾಮುಖ್ಯ ಪಡೆದಿದೆ.

ಅಲ್ಲಲ್ಲಿ ಕಾಡಿನಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿದ್ದ ಈ ಗಿಡವನ್ನು ಈಚೆಗೆ ವಾಣಿಜ್ಯ ಬೆಳೆಯನ್ನಾಗಿ ದೊಡ್ಡ ತೋಟಗಳಲ್ಲಿ ಬೆಳೆಸುತ್ತಿದ್ದಾರೆ. ಕಾಯಿಯ ಗಾತ್ರದ ಮೇಲೆ ಏಲಕ್ಕಿಯನ್ನು ಮೂರು ವಿಧವಾಗಿ ವಿಂಗಡಿಸಲಾಗಿದೆ. ಸಿಲೋನ್ ಶ್ರೀಲಂಕ ಏಲಕ್ಕಿ ತೀರ ಉದ್ದವಾಗಿದೆ. ಮೈಸೂರು ಏಲಕ್ಕಿ ಅಷ್ಟು ಉದ್ದವಿಲ್ಲ. ಮಲಬಾರ್ ಏಲಕ್ಕಿ ಇನ್ನೂ ಗಿಡ್ಡ. ಏಲಕ್ಕಿ ದಕ್ಷಿಣ ಭಾರತದಲ್ಲಿ ಅಧಿಕವಾಗಿಯೂ ಸಿಲೋನ್, ಜಾವಗಳಲ್ಲಿ ಸ್ವಲ್ಪಮಟ್ಟಿಗೂ ಬೆಳೆಯುತ್ತದೆ. ನಿಜವಾದ ಏಲಕ್ಕಿಗೆ ಸಂಬಂಧಿಸಿದ ಇನ್ನೊಂದು ವಿಧದ ದೊಡ್ಡ ಏಲಕ್ಕಿ (ಅಮೋಮಮ್ 
ಕಾರ್ಡಮನ್) ಎಂಬುದು ಮುಖ್ಯವಾಗಿ ಭಾರತ ಮತ್ತು ಮಲಯ ಪರ್ಯಾಯ ದ್ವೀಪದಲ್ಲಿ ಇದನ್ನು ಬೆಳೆಯಲಾಗುತ್ತಿತ್ತು. ಈಗ ಇದು ತನ್ನ ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಗ್ವಾಟೆಮಾಲ, ಟಾಂಜೇನಿಯ, ಶ್ರೀಲಂಕಾ, ಥಾಯ್ಲೆಂಡ್, ಲಾವೋಸ್, ವಿಯೆಟ್ನಾಂ, ಕೊಸ್ಟಾರಿಕಾ, ಎಲ್ಸಾಲ್ವೆಡಾರ್ ಮೊದಲಾದ ದೇಶಗಳಲ್ಲೂ ಇದನ್ನು ಬೆಳೆಯಲಾಗುತ್ತಿದೆ. ಅಲ್ಲಲ್ಲಿ ಕಾಡಿನಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿದ್ದ ಈ ಗಿಡದ ಹಣ್ಣುಗಳ ಪ್ರಯೋಜನವನ್ನು ಗುರುತಿಸಿ ಇದನ್ನು ತೋಟಗಳಲ್ಲಿ ಬೆಳೆಯಲು ಪ್ರಾರಂಭಿಸಲಾಯಿತು. ಕ್ರಿಸ್ತಪೂರ್ವದ 
ಶತಮಾನಗಳಲ್ಲಿ ರೋಮನ್ ಸಾಮ್ರಾಜ್ಯ ಪೂರ್ವದೇಶಗಳೊಂದಿಗೆ ನಡೆಸುತ್ತಿದ್ದ ವಾಣಿಜ್ಯದ ಸರಕು ಪಟ್ಟಿಯಲ್ಲಿ ಏಲಕ್ಕಿಯ ಉಲ್ಲೇಖವಿದೆ. ಇದನ್ನು ಇಲಾಚಿ ಎಂದೂ ಕರೆಯಲಾಗುತ್ತಿತ್ತು. ಅಂತಾರಾಷ್ಟ್ರೀಯ ವಾಣಿಜ್ಯ ವಿಸ್ತರಿಸಿದಂತೆಲ್ಲ, ಮಧ್ಯಪ್ರಾಚ್ಯ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಇದರ ಬೇಡಿಕೆ ಹೆಚ್ಚಿತು. ಶೀತ ಹವಾಗುಣವಿರುವ ದೇಶಗಳಲ್ಲಿ ಕಾಪಿs, ಟೀ ಮತ್ತು ತಂಪು ಪಾನೀಯಗಳೊಂದಿಗೆ ಇದನ್ನು ಸೇರಿಸಿ ಸೇವಿಸುವ ಪದ್ಧತಿ ರೂಡಿsಗೆ ಬಂತು. ಅಡುಗೆಯಲ್ಲಿ ಇದನ್ನು ಇದರ ಪರಿಮಳ ಗುಣಕ್ಕಾಗಿ ಬಳಸಲಾಗುತ್ತದೆ. ಔಷಧೀಯ ಗುಣಗಳಿಗಾಗಿಯೂ ಇದು ಪ್ರಸಿದ್ಧವಾಗಿದೆ.

ಇದನ್ನು ಮುಖ್ಯವಾಗಿ ಮೂರು ಬಗೆಗಳಾಗಿ ವಿಂಗಡಿಸಲಾಗುವುದು. ಸಿಲೋನ್ ಏಲಕ್ಕಿ, ಮೈಸೂರು ಏಲಕ್ಕಿ ಮತ್ತು ಮಲಬಾರ್ ಏಲಕ್ಕಿ. ಮೊದಲನೆಯದು ಸ್ವಲ್ಪ ಉದ್ದ ಕಾಯಿಯಾದರೆ, ಇನ್ನೆರಡು ಚಿಕ್ಕ ಗಾತ್ರದವು. ಏಲಕ್ಕಿಯ ಇನ್ನೂ ದೊಡ್ಡ ಬಗೆಯದು ಆಗ್ನೇಯ ಏಷ್ಯ ಮತ್ತು ಆಫ್ರಿಕದ ಭೂಮಧ್ಯ ರೇಖಾ ವಲಯದ ಹವಾಗುಣದಲ್ಲಿ ಬೆಳೆಯುತ್ತದೆ. ಇದು ಮುಖ್ಯವಾಗಿ ಮಳೆಯಾಶ್ರಿತ ಬೆಳೆ. ತಂಪಾಗಿರುವ ಹಸುರು ಕಾಡಿನಿಂದ ಕೂಡಿರುವ ತೇವಾಂಶಭರಿತ ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಇಂತಹ ಈ ಬೆಳೆ ಬೆಳೆಯುವ ಶ್ರೇಷ ವಿವಾದ ಸ್ಥಳಕ್ಕೆ 
ಕರ್ನಾಟಕದ ಮಲೆನಾಡು ಭಾಗದಲ್ಲಿ ಹನಾಲು, ಹಡ್ಲು ಎಂದು ಕರೆಯುತ್ತಾರೆ. ಇಳಿಜಾರಿನ ಜಾಗದಲ್ಲೂ ಈ ಬೆಳೆಯನ್ನು ಬೆಳೆಯಬಹುದು. ಹಿಂದೆ ಕರ್ನಾಟಕದ ಕಾಡುಗಳಲ್ಲಿ ಅಲ್ಲಲ್ಲಿ ಕೆಲವು ಮರಗಳನ್ನು ಕಡಿದು ಉರುಳಿಸಿದಾಗ ಪ್ರಾಣಿ ಪಕ್ಷಿಗಳು ಹಿಕ್ಕೆಯ ರೂಪದಲ್ಲಿ ತಂದು 

ಹಾಕಿರುವ ಏಲಕ್ಕಿ ಬೀಜ ಗಳು ಸೂರ್ಯನ ಬಿಸಿಲಿಗೆ ಮೊಳಕೆಯೊಡೆದು ಗಿಡಗಳಾಗಿ ಬೆಳೆಯುತ್ತಿದ್ದವು. ಮೂರು ವರ್ಷಗಳಲ್ಲಿ ಗಿಡ ಬಲಿತು ಕಾಯಿ ಬಿಡುತ್ತಿತ್ತು. ಹಣ್ಣು ಪಕ್ವವಾದ ಮೇಲೆ ಕುಯ್ದು ತಂದು ವ್ಯಾಪರಸ್ಥರಿಗೆ ಮಾರುತ್ತಿದ್ದರು. ಆದರೆ ಕಾಡು ಕಡಿಮೆಯಾದಂತೆ ವ್ಯವಸ್ಥಿತವಾದ ಕೃಷಿ ಪದ್ಧತಿಯಿಂದ ಮಾತ್ರ ಏಲಕ್ಕಿ ಬೆಳೆಯುವುದು ಸಾಧ್ಯವಾಗಿದೆ.

ಸಾಮಾನ್ಯವಾಗಿ ಇದನ್ನು ಬೀಜಗಳಿಂದ ವೃದ್ಧಿ ಮಾಡಲಾಗುತ್ತದೆ. ಉತ್ತಮ ಇಳುವರಿ ಮತ್ತು ಗುಣಗಳನ್ನು ಹೊಂದಿರುವ ಈ ಗಿಡಗಳಲ್ಲಿ ಹಿಡಿದಿರುವ ಇದರ ಹಣ್ಣನ್ನು ಆರಿಸಿ ಕುಯ್ದು ಬೀಜ ಮಾಡಲು ಬಳಸುತ್ತಾರೆ. ಇದರ ಸಿಪ್ಪೆ ತೆಗೆದು ಬೀಜವನ್ನು ಬೂದಿಯಿಂದ ಮಿಶ್ರಮಾಡಿ ನೆರಳಿನಲ್ಲಿ ಒಣಗಿಸಿ ಒಂದು ವಾರ ಬಿಟ್ಟು ನೆಲದಲ್ಲಿ ಅಂದರೆ ಮಡಿಗಳಲ್ಲಿ ಹಾಕಿ, ಕಾವು ಬರುವಂತೆ ಬತ್ತದ ಹುಲ್ಲು ಅಥವಾ ಚಿಮ್ಮಿ ಸೊಪ್ಪು ಅಥವಾ ಸೀಮೆಸೀಗೆ (ಲಂಟಾನ) ಸೊಪ್ಪನ್ನು ಮುಚ್ಚಿ ಮೇಲಕ್ಕೆ ಮೂರು ನಾಲ್ಕು ಅಡಿಗಳ ಎತ್ತರದಲ್ಲಿ ಚಪ್ಪರ ಹಾಕಿ ನೆರಳನ್ನು ಕಲ್ಪಿಸಲಾಗುತ್ತದೆ. ಹೀಗೆ ಒಟ್ಟು ಪಾತಿ ಮಾಡುವ ಜಮೀನನ್ನು ಬಹಳ ಸೂಕ್ಷ್ಮವಾಗಿ ಹದಮಾಡಿ ತಯಾರು ಮಾಡಬೇಕು. ಫಲವತ್ತಾದ ಮಣ್ಣನ್ನು ಅಷ್ಟೇ ಗೊಬ್ಬರದೊಂದಿಗೆ ಮಿಶ್ರಮಾಡಿ ಏರುಮಡಿಗಳನ್ನು ರಚಿಸಲಾಗುತ್ತದೆ. ಸಾಮಾನ್ಯವಾಗಿ ಈ ಮಡಿ ಅಥವಾ ಪಾತಿಗಳಿಗೆ ನಾಲ್ಕು ಅಡಿ ಅಗಲದ ಮುಕ್ಕಾಲು ಅಡಿ ಎತ್ತರದ ಪಾತಿ ಮಾಡುತ್ತಾರೆ. ಇದರಿಂದ ಮಳೆಗಾಲದಲ್ಲಿ ಹೆಚ್ಚಾದ ನೀರು ಬಸಿದು ಹೋಗಿ ಸಸಿಗಳು ಕೊಳೆಯದಂತೆ ರಕ್ಷಿಸಲು ಸಾಧ್ಯವಾಗುತ್ತದೆ. ಈ ಏರು ಮಡಿಗಳಲ್ಲಿ ಬೀಜಗಳನ್ನು ಬಿತ್ತಿ ಸ್ವಲ್ಪ ಮಣ್ಣಿನೊಳಗೆ ಹುಗಿದುಕೊಳ್ಳುವಂತೆ ಮೇಲ್ಮಣ್ಣನ್ನು ಚೆಲ್ಲುತ್ತಾರೆ. ಬೀಜ ಬಿತ್ತಿದ ಒಂದು ತಿಂಗಳ ಅನಂತರ ಮೊಳಕೆ ಬರಲು ಪ್ರಾರಂಬಿsಸಿ ಸುಮಾರು ಎಂಟು ತಿಂಗಳಲ್ಲಿ ಸಸಿ ದೊಡ್ಡದಾಗುತ್ತದೆ. ಆಗ ತೀರ ಉದ್ದ ಅಂದರೆ ಎರಡು ಮೂರು ಅಡಿ ಉದ್ದ ಬಂದ ಸಸಿಗಳನ್ನು ಕಿತ್ತು ನೇರವಾಗಿ ತೋಟಗಳಲ್ಲಿ  ಹಾಕುತ್ತಾರೆ. ಸಸಿಗಳು ಇನ್ನೂ ಚಿಕ್ಕವಾಗಿದ್ದರೆ ಮೂರು ನಾಲ್ಕು ಇಂಚಿಗೊಂದು ಗಿಡ ಬಿಟ್ಟು ಉಳಿದ ಸಸಿಗಳನ್ನು ಕಿತ್ತು ಪ್ರತ್ಯೇಕವಾಗಿ ಮಾಡಿದ ಪಾತಿಯಲ್ಲಿ ನೆಟ್ಟು ಮರುವರ್ಷ ಅವನ್ನೆಲ್ಲ ಕಿತ್ತು ತೋಟದಲ್ಲಿ ನೆಡುತ್ತಾರೆ. ಇತ್ತೀಚೆಗೆ ಬೀಜದಿಂದ ಮಾಡಿದ ಸಸಿಗಿಂತ ಗಿಡಗಳ ಬುಡದಲ್ಲಿ ಬರುವ ಕಂದುಗಳನ್ನು ನೇರವಾಗಿ ತೋಟದಲ್ಲಿ ನೆಡುವುದರಿಂದ ಅವು ಬೇಗ ಫಸಲು ಬಿಡುತ್ತವೆ ಮತ್ತು ಅದಿsಕ ಇಳುವರಿ ಕೊಡುತ್ತವೆ ಎಂದು ಕಂಡುಕೊಳ್ಳಲಾಗಿದೆ. ಇದಕ್ಕಾಗಿ ತೋಟದಲ್ಲಿ ಬಿಡಿ ಗಿಡಗಳನ್ನು ನೀರಿನ ಕೊರಕಲಿಗೆ ಹಾಕಿ ನೆಟ್ಟು ಅದರಿಂದ ಬರುವ ನಾಲ್ಕೈದು ಕಂದುಗಳನ್ನು ಅನಂತರ ಕಿತ್ತು ತೋಟಕ್ಕೆ ಹಾಕುವುದುಂಟು.

ತೋಟದಲ್ಲಿ ಸುಮಾರು ನಾಲ್ಕು ಐದಡಿ ದೂರಕ್ಕೊಂದು ಗುಂಡಿ ಬರುವಂತೆ ತೆಗೆದು ಬಡ್ಡೆಗಳನ್ನು ನೆಡಲಾಗುತ್ತದೆ. ಅವನ್ನು ದನಕರುಗಳು ತಿನ್ನದಂತೆ ನೋಡಿಕೊಳ್ಳಬೇಕು. ಕಳೆ ತೆಗೆದು ಗೊಬ್ಬರ ಹಾಕಿ, ಅಗತ್ಯ ಕ್ರಿಮಿನಾಶಕ ಸಿಂಪಡಿಸಿ ಪೋಷಿಸಬೇಕು. ಈ ಬೆಳೆಗೆ ಆಯ್ದುಕೊಂಡ ಜಾಗ ಫಲವತ್ತಾಗಿದ್ದು ಬೇಸಗೆಯಲ್ಲಿ ನೀರಾವರಿ ಅಥವಾ ಹನಿ ನೀರಾವರಿ ಒದಗಿಸುವುದು ಸಾಧ್ಯವಿದ್ದರೆ ಬೆಳೆ ಬೇಗ ಅಬಿsವೃದ್ಧಿಯಾಗುತ್ತದೆ. ಗಿಡ ನೆಟ್ಟ ಮೂರು ವರ್ಷಗಳಲ್ಲಿ ಫಸಲು ಬರಲು ಪ್ರಾರಂಭವಾಗುತ್ತದೆ. ಆಯಾ ಭೂಮಿಯನ್ನನುಸರಿಸಿ ಐದರಿಂದ ಹತ್ತು ವರ್ಷಗಳವರೆಗೂ ಸುಸ್ಥಿತಿಯಲ್ಲಿರುತ್ತದೆ. ಸಾಂದ್ರ ಬೇಸಾಯ ಅನುಸರಿಸದೆ ಮಳೆಯನ್ನೇ ಆಧರಿಸಿ ಬೆಳೆ ಬೆಳೆದು ಸಾಮಾನ್ಯ ಕೃಷಿ ಮಾಡಿದರೆ ಎರಡು ಮೂರು ಫಸಲು ಕುಯ್ಯುವಷ್ಟರಲ್ಲಿ ತೋಟ ಕಳಪೆಯಾಗುತ್ತದೆ. ಮತ್ತೆ ಹೊಸದಾಗಿ ಗಿಡ ಹಾಕಬೇಕಾಗುತ್ತದೆ. ಏಲಕ್ಕಿ ಗಿಡಗಳಿಗೆ ರಾಸಾಯನಿಕ ಗೊಬ್ಬರಕ್ಕಿಂತ ಸಾವಯವ ಗೊಬ್ಬರ ಹೆಚ್ಚು ಸೂಕ್ತವೆಂದು ತಿಳಿದುಬಂದಿದೆ. ಆಯಾ ಮಣ್ಣಿನ ಗುಣವನ್ನು ಪರೀಕ್ಷಿಸಿ ಸ್ವಲ್ಪ ಪ್ರಮಾಣದ ರಾಸಾಯನಿಕ ಗೊಬ್ಬರವನ್ನೂ ನೀಡಬಹುದು. ಈ ಬೆಳೆಯನ್ನು ಹೆಚ್ಚು ಸ್ಥಿರ ಬೆಳೆಯಾಗಿ ಮಾಡಲು ಪ್ರಯತ್ನಗಳು ಮುಂದುವರಿದಿವೆ.

1957ರಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನಲ್ಲಿ ಮೂಡಿಗೆರೆ ಕೈಮರದ ಬಳಿ ಇದರ ಪ್ರಾದೇಶಿಕ ಸಂಶೋಧನ ಕೇಂದ್ರವನ್ನು ಸ್ಥಾಪಿಸಲಾಯಿತು. ಇದು ಪ್ರಾರಂಭದಲ್ಲಿ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ಅದಿsೕನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅನಂತರ ಇದನ್ನು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿಸಲಾಯಿತು (1965). ಈ ಸಂಸ್ಥೆ ಕಡೂರು- ಮಂಗಳೂರು ಹೆದ್ದಾರಿಯಲ್ಲಿದ್ದು ನೂರಾರು ಎಕರೆಗಳ ಜಮೀನು ಹೊಂದಿದೆ. ಈಗ ಇದೇ ಆವರಣದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪಿತವಾಗಿದೆ. ಏಲಕ್ಕಿ, ಮೆಣಸು, ಕಿತ್ತಳೆ 
ಇತ್ಯಾದಿಗಳನ್ನು ವೈe್ಞÁನಿಕವಾಗಿ ಬೆಳೆಸುವುದು ಮತ್ತು ಅವುಗಳ ಹೊಸ ತಳಿಗಳನ್ನು ಅಬಿsವೃದ್ಧಿಪಡಿಸುವುದು ಈ ಸಂಸ್ಥೆಯ ಉದ್ದೇಶ. 1984ರಲ್ಲಿ ಈ ಸಂಸ್ಥೆಯ ವಿe್ಞÁನಿಗಳು ರೂಪಿಸಿದ ಮೂಡಿಗೆರೆ 1 ಏಲಕ್ಕಿ ತಳಿಯನ್ನು ಬಿಡುಗಡೆ ಮಾಡಲಾಯಿತು. 1994ರಲ್ಲಿ ಇನ್ನೂ ಸುಧಾರಿತ ತಳಿಯಾದ ಮೂಡಿಗೆರೆ 2ನ್ನು ಬಿಡುಗಡೆ ಮಾಡಲಾಯಿತು. ಬೆಳೆಗಾರರಿಗೆ ಸಸಿಗಳನ್ನು ಒದಗಿಸುವುದು, ಮಾದರಿ ಪ್ರಾತ್ಯಕ್ಷಿಕೆ ನಡೆಸಿ ಅವರಿಗೆ ತರಬೇತಿ ನೀಡುವುದು ಇದರ ಕಾರ್ಯಕ್ರಮಗಳಲ್ಲಿ ಸೇರಿವೆ.

ಈ ಗಿಡ ಸಮಗ್ರವಾಗಿ ಬೆಳೆದಾಗ ಐದು ಆರು ಅಡಿ ಎತ್ತರದವರೆಗೂ ಬೆಳೆಯುತ್ತದೆ. ಶುಂಠಿ, ಅರಿಶಿಣದಂತೆ ಈ ಸಸ್ಯ ಕಂಡುಬಂದರೂ ನೆಲದ ಒಳಗೆ ಗೆಡ್ಡೆ ರೂಪದಲ್ಲಿ ಫಲ ಬಿಡುವುದಿಲ್ಲ. ಕಾಂಡದಲ್ಲೂ ಫಲ ಬಿಡುವುದಿಲ್ಲ. ಏಲಕ್ಕಿ ಗಿಡದ ಬುಡದಲ್ಲಿ ಸುತ್ತ ಗರಿಗಳು ಬರುತ್ತವೆ. ಗರಿ ಎಂದರೆ ಉದ್ದಕ್ಕೆ ಬೇರಿನಂತಿರುವ, ಮಧ್ಯೆ ಮಧ್ಯೆ ಟಿಸಿಲೊಡೆದಿರುವ ಒಳ್ಳೆಯ ಮಾದರಿ. ಇದು ಏಪ್ರಿಲ್, ಮೇ ತಿಂಗಳಿನಿಂದಲೇ ಮೊದಲ ಮಳೆಗೆ ಹೊರಹೊಮ್ಮಲು ಪ್ರಾರಂಭವಾಗುತ್ತದೆ. ಒಂದು ಗಿಡಕ್ಕೆ ಇಂಥ ನಾಲ್ಕು ಗರಿಗಳು ಹೊರಟು ಹತ್ತಾರು ಟಿಸಿಲುಗಳೊಂದಿಗೆ 

ನೆಲದ ಮೇಲೆ ಸು.2 ಅಡಿಗಳವರೆಗೂ ಹಬ್ಬಿ ಹರಡಿಕೊಳ್ಳುತ್ತದೆ. ಮುಂಗಾರು ಮಳೆ ಹೆಚ್ಚಿದಂತೆಲ್ಲ ಈ ಗರಿಗಳಲ್ಲಿ ನೀಲಿ ಬಣ್ಣದ ಹೂ ಬಿಟ್ಟು ಕಾಯಿಗಟ್ಟುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಈ ಕಾಯಿಗಳು ಸೆಪ್ಟೆಂಬರ್ ಪ್ರಾರಂಭಕ್ಕೆಲ್ಲ ಪಕ್ವವಾಗತೊಡಗುತ್ತವೆ. ಹಣ್ಣಾದಂತೆಲ್ಲ ಕಿತ್ತು ಒಣಗಿಸಿ ಸಂಸ್ಕರಿಸಿ ಮಾರಾಟಕ್ಕೆ ಬಿಡುಗಡೆ ಮಾಡಲಾಗುತ್ತದೆ. ಹೂ ಬಿಡುವ ಕಾರ್ಯ ಮಳೆ ಚೆನ್ನಾಗಿದ್ದರೆ ನವೆಂಬರ್ವರೆಗೂ ಮುಂದುವರಿಯುತ್ತದೆ. ಆದ್ದರಿಂದ ಏಲಕ್ಕಿ ಕುಯಿಲು ಸಹ ಡಿಸೆಂಬರ್ ಅಂತ್ಯದವರೆಗೂ ನಡೆಯುತ್ತದೆ.

ಬಲಿತ ಹಣ್ಣು ಕಾಯಿಗಳನ್ನು 4-5 ದಿವಸಗಳ ಕಾಲ ಪದೇಪದೇ ಬಿಸಿಲಿನಲ್ಲಿ ಒಣಗಿಸಿ, ಸ್ವಚ್ಫಗೊಳಿಸಿ ವ್ಯಾಪಾರಕ್ಕೆ ಅಣಿಮಾಡುತ್ತಾರೆ. ತೊಟ್ಟು ಉದುರಿಸಿ ಸ್ವಚ್ಫಮಾಡಲು ಈಗ ಯಂತ್ರಗಳು ಬಂದಿವೆ. ಬಿಸಿಲು ಸಾಕಾಗದೆ ಮೋಡಗಟ್ಟಿದ ವಾತಾವರಣದಲ್ಲಿ ಒಣಗಿಸಿದರೆ ಇದರ ಗುಣಮಟ್ಟ ಹಾಳಾಗುತ್ತದೆ. ಇದನ್ನು ನಿವಾರಿಸುವ ಸಲುವಾಗಿ ಮಣ್ಣಿನ ಗೂಡು ಕಟ್ಟಿ ಮೇಲೆ ಸಾರಿಸಿ, ಅದರ ಮೇಲೆ ಇದರ ಹಣ್ಣು ಹರಡಿ ಗೂಡಿನ ಒಳಗೆ ಬೆಂಕಿ ಹಾಕಿ ಅದರ ಕಾವಿನಿಂದ ಇದು ಒಣಗುವಂತೆಯೂ ಮಾಡುತ್ತಾರೆ. ಈ ಕ್ರಮದಿಂದ ಇದು ಹಸುರು ಬಣ್ಣಕ್ಕೆ 
ತಿರುಗುತ್ತದೆ. ಇದನ್ನು ಒಣಗಿಸಲು ಈಗ ಆಧುನಿಕ ಯಂತ್ರಗಳೂ ಬಂದಿವೆ. ಸುಸ್ಥಿತಿಯಲ್ಲಿರುವ ತೋಟದಲ್ಲಿ ವರ್ಷಕ್ಕೆ ಎಕರೆ ಒಂದಕ್ಕೆ ಐವತ್ತರಿಂದ ಅರವತ್ತು ಕೆ.ಜಿ. ಕುಯ್ಲುಮಾಡಬಹುದು. ಆಧುನಿಕ ಕೃಷಿ ಅನುಸರಿಸಿ ಬೇಸಿಗೆಯಲ್ಲಿ ತುಂತುರು ನೀರಾವರಿ ನೀಡಿದರೆ 500 ಕೆ.ಜಿ.ಗೂ ಹೆಚ್ಚು ಇದನ್ನು ಬೆಳೆಯಬಹುದೆಂದು ಕಂಡುಬಂದಿದೆ. ಈ ಬೆಳೆ ಸಮೃದ್ಧವಾಗುವುದು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೀಳುವ ಮಳೆಯನ್ನು ಹೆಚ್ಚಾಗಿ ಅವಲಂಬಿಸಿದೆ. ಆಗ ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಬಿಡುವಿನಲ್ಲಿ ಮಳೆಯಾಗದಿದ್ದರೆ ಮುಂದೆ ಎಷ್ಟೇ ಮಳೆ ಬಂದರೂ ಫಸಲಿಗೆ ಧಕ್ಕೆಯಾಗುತ್ತದೆ. ಕೃತಕವಾಗಿ ತುಂತುರು ಅಥವಾ ಹನಿ ನೀರಾವರಿಯಿಂದ ಈ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಪರಿಹರಿಸಿ ಕೊಳ್ಳಬಹುದು. ಆದರೆ ವಾತಾವರಣದಲ್ಲಿ ಹೆಚ್ಚಿನ ತೇವಾಂಶ ಇಲ್ಲದಿದ್ದರೆ ಆಗಲೂ ಫಸಲು ಕಡಿಮೆಯಾಗುತ್ತದೆ.

ಇದಕ್ಕೆ ಅನೇಕ ರೋಗಬಾಧೆಗಳುಂಟು. ನಾನಾ ತರದ ಕೀಟಗಳು ಇದರ ಹೀಚು ಮಿಡಿಗೆ ಸೋಂಕಿ ಕಾಯಿ ಬಲಿಯದೆ ಪೊಳ್ಳಾಗುವಂತೆ ಮಾಡುತ್ತವೆ. ನುಸಿರೋಗ ತಗುಲಿದರೆ ಹೀಚಿನಲ್ಲೇ ಕಾಯಿಯ ಬೆಳೆವಣಿಗೆ ಕುಂಠಿತವಾಗಿ ಕಜ್ಜಿ ಕಾಯಿ ಎನಿಸಿಕೊಳ್ಳುತ್ತದೆ. ಕಾಂಡ ಕೊರಕ ಕೀಟಗಳು ಗಿಡಗಳ ದಿಂಡನ್ನು ತಿಂದು ಟೊಳ್ಳು ಮಾಡಿ ಗಿಡಗಳನ್ನೇ ನಾಶಪಡಿಸುತ್ತವೆ. ಇವುಗಳ ನಿವಾರಣೆಗೆ ವಿವಿಧ ಕ್ರಿಮಿನಾಶಕಗಳು ಮಾರುಕಟ್ಟೆಗೆ ಬಂದಿವೆ. ಅವುಗಳಲ್ಲಿ ಬೋರ್ಡೊ ಮಿಶ್ರಣ, ಮೋನೋ ಕ್ರೊಟೋಫಾಸ್ (ನುವಕ್ರಾನ್) ಫೋಸೋಲಾನ್ (ಝೊಲಾನ್) 
ಮುಖ್ಯವಾದವು. ಇವನ್ನು ನಿಗದಿತ ಪ್ರಮಾಣದಲ್ಲಿ ಸಿಂಪಡಿಸಿ ಕೀಟ ಬಾಧೆಯನ್ನು ನಿವಾರಿಸಿಕೊಳ್ಳಬಹುದು. ಈ ಗಿಡಗಳಿಗೆ ಬೇರಿನ ಸೋಂಕಿನಿಂದ ಕಟ್ಟೆರೋಗ ಬರುವುದುಂಟು. ಹಣ್ಣುಗಳಿಗೆ ಅಳಿಲು, ಹಕ್ಕಿಗಳ ಕಾಟವೂ ಇದೆ. ಮಂಗಗಳ ಕಾಟವೂ ಉಂಟು. ಮಂಗಗಳು ಗಿಡಗಳನ್ನು ಸಿಗಿದು ಹಾಳು ಮಾಡುವುದುಂಟು. 

ಇದಕ್ಕಿರುವ ಬೇಡಿಕೆ ಮತ್ತು ಬೆಲೆಯಿಂದಾಗಿ ವಿವಿಧ ರಾಷ್ಟ್ರಗಳು ಹೊಸದಾಗಿ ಇದನ್ನು ಬೆಳೆಯಲು ಮುಂದಾಗಿವೆ. ಇದನ್ನು ಬೆಳೆಯುವ ಒಟ್ಟು ಪ್ರದೇಶದ ಸೇ.90ರಷ್ಟು ಪ್ರದೇಶ ಗ್ವಾಟೆಮಾಲದಲ್ಲಿದ್ದು ಅಲ್ಲಿನ ಉತ್ಪತ್ತಿ ಪ್ರಪಂಚದ ಇದರ ಉತ್ಪತ್ತಿಯ ಸೇ.48ರಷ್ಟು ಆಗುತ್ತದೆ. ಭಾರತದ ಕೇರಳದಲ್ಲಿ 44,250 ಹೆಕ್ಟೇರು, ಕರ್ನಾಟಕದಲ್ಲಿ 33,743 ಹೆಕ್ಟೇರು ಮತ್ತು ತಮಿಳುನಾಡಿನಲ್ಲಿ 6048 ಹೆಕ್ಟೇರುಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಈ ಏಲಕ್ಕಿಯನ್ನು ಸಣ್ಣ ಏಲಕ್ಕಿ ಎಂದು ಕರೆಯಲಾಗುತ್ತದೆ. ಈಶಾನ್ಯ ಭಾರತದ ರಾಜ್ಯಗಳಾದ ಅಸ್ಸಾಂ, ಮಣಿಪುರ, ಮೇಘಾಲಯಗಳಲ್ಲೂ ಇದನ್ನು ಬೆಳೆಯುತ್ತಿದ್ದು ಆ ಏಲಕ್ಕಿಯನ್ನು ದೊಡ್ಡ ಏಲಕ್ಕಿ ಎಂದು ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಬೆಳೆಯುವ ಜಿಲ್ಲೆ ಕೊಡಗು (14,500 ಹೆಕ್ಟೇರ್). ಹಾಸನ (8,480 ಹೆಕ್ಟೇರ್), ಚಿಕ್ಕಮಗಳೂರು (5,347 ಹೆಕ್ಟೇರ್), ಶಿವಮೊಗ್ಗ (318 ಹೆಕ್ಟೇರ್) ಮತ್ತು ಉತ್ತರ ಕನ್ನಡ (317 ಹೆÀಕ್ಟೇರ್) ಜಿಲ್ಲೆಗಳು ಅನಂತರದ ಸ್ಥಾನದಲ್ಲಿ ಬರುತ್ತವೆ. ಹಾಸನ ಜಿಲ್ಲೆಯ ಮಂಜರಾಬಾದ್ ಅಥವಾ ಸಕಲೇಶಪುರ ತಾಲ್ಲೂಕಿನ ಏಲಕ್ಕಿ ಉತ್ತಮ ಗುಣಮಟ್ಟದ್ದು. ಇದಕ್ಕೆ ಸಿಗುವ ಬೆಲೆಯೂ ಹೆಚ್ಚು.

ಇಂದು ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಈ ಬೆಳೆ ಕ್ಷೀಣ ಸ್ಥಿತಿಯಲ್ಲಿದೆ. ಕಾಡಿನ ನಾಶ ಮತ್ತು ಪಾರಂಪರಿಕವಾಗಿ ಏಲಕ್ಕಿ ಬೆಳೆಯುತ್ತಿದ್ದ ಪ್ರದೇಶಗಳಲ್ಲಿ ಕಾಪಿs ಸಾಗುವಳಿಯನ್ನು ವಿಸ್ತರಿಸಿದ್ದು ಇಂಥ ಕ್ಷೀಣ ಸ್ಥಿತಿಗೆ ಕಾರಣಗಳಾಗಿವೆ ಎನ್ನಬಹುದು. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ